Tuesday, March 27, 2012

{ನುಡಿ} ಮುತ್ತು 8

ಸಜ್ಜನರಿಗಿದು ಕಾಲವೇ ಅಲ್ಲ
ಸುಸಂಸ್ಕೃತರಿಗಿದು ನೆಲೆಯೇ ಅಲ್ಲ
ನಡೆಯುತಿರೆ ಹಿಂಬಾಲಿಸುವ
ನೆರಳೇ ಕೈ ಚಾಚಿದರೆ
ಕೊಡಲು ಎನ್ನ ಬಳಿ
ಏನುಂಟು ಮಲ್ಲಿಕಾರ್ಜುನ!

Saturday, March 24, 2012

ಮುತ್ತು 7


ಸಕಲ ವೈಭವವುಂಟು
ಕಲ್ಲು ಸಕ್ಕರೆಯೂ ಉಂಟು
ವೈಭವದಲಿ ನಲಿವಿಲ್ಲ
ಸಕ್ಕರೆಯಲಿ ಸಿಹಿಯಿಲ್ಲ
ಸುಮ್ಮನೇ ಜಡವಾಗಿಹ ಎನ್ನ ಮನಕ್ಕೆ
ದಾರಿಯ ತೋರೋ ಮಲ್ಲಿಕಾರ್ಜುನ

Friday, March 23, 2012

ಮುತ್ತು 6

ಬೇಡವೆಂದರೂ ಕಾಡುವ
ನೋಡದಿದ್ದರೂ ನೆನೆವ
ಮರೆತೆನೆಂದರೂ ಬರುವ
ಸುಮ್ಮನೇ ನೋಯಿಸುವ
ಮರುಳ ಮನಸನು ಹೊಸಕಿ
ಶುದ್ಧನನ್ನಾಗಿಸೋ ಎನ್ನ ಮಲ್ಲಿಕಾರ್ಜುನ ..

ಮುತ್ತು 5

ನಟ್ಟನಡು ರಾತ್ರಿಯಲ್ಲಿ
ಸೂರ್ಯನನ್ನು ಹುಡುಕದಿರು
ಮಧ್ಯಾಹ್ನ ಸುಡು ಬಿಸಿಲಿನಲ್ಲಿ
ಚಂದ್ರನನ್ನು ನೆನೆಯದಿರು
ಹಗಲು ಇರುಗಳೊಂದೆ
ಬೆಳಕಿನಲ್ಲಿ ವ್ಯತ್ಯಾಸವಷ್ಟೆ
ಹಗಲಿನಲ್ಲಿ ಸೂರ್ಯನಾಗು
ಇರುಳಲ್ಲಿ ಚಂದ್ರನಾಗು
ಕತ್ತಲಲ್ಲಿ ಕತ್ತಲಾಗು
ಒಟ್ಟಿನಲ್ಲಿ ಶಾಂತನಾಗು ಮಲ್ಲಿಕಾರ್ಜುನ.........