Wednesday, December 28, 2011

ಜೀವನ


 
ಬದುಕೆಂಬ ಬಂಡಿಯನ್ನೇರಿ
ಕಷ್ಟ ಸುಖವೆಂಬ ಎತ್ತುಗಳ ಜೊತೆಗೂಡಿ
ನೋವು ನಲಿವಿನ ಸಂಗದೊಂದಿಗೆ
ಉಸಿರಿರುವ ತನಕ ಅನುದಿನವೂ ನಿಲ್ಲದೆ
ಪಯಣಿಸುವ ಪರಿಯೇ ಜೀವನ..

1 comment:

  1. ಸುಂದರ ಭಾವ ಮತ್ತು ಬದುಕಿನ ನಿಯಮಗಳ ತೋರಿಸುವ ಕವನ...
    ನಿಮ್ಮ ಜೀವನ ಕಲ್ಪನೆ ಮೆಚ್ಚಿದೆವು... ನಿಮ್ಮ ಆಲೋಚನೆಯ ಮನದಲ್ಲಿ...
    ಬದುಕು ಎನ್ನುವುದು ಒಂದು ಪ್ರಯಾಣ...
    ನಮ್ಮ ಕಲ್ಪನೆಯಲ್ಲಿ ಬದುಕು "ಬಾಳೊಂದು ಚದುರಂಗದಾಟ"....
    ಅಲ್ಲಿ ಎತ್ತುಗಳ ಜೋಡಿ ಸಿಗುವುದಿಲ್ಲ...
    ಅಲ್ಲಿರುವುದೆಲ್ಲಾ ಬಲಿಷ್ಟ ಬದುಕಿಗೆ ಉದಾಹರಣೆ ಆಗುವ ಆನೆಗಳ ಜೋಡಿ..
    ಬದುಕಿನ ವೇಗವನ್ನು ಮತ್ತು ಓಡುವ ಕಾಲಚಕ್ರದ ಸಮಯಕ್ಕೆ ಸಾಟಿಯಾಗಲು ಅಶ್ವಗಳ ಜೋಡಿ..
    ಬದುಕಿನ ಘನತೆ ಗೌರವಗಳಲ್ಲಿ ಎತ್ತರ ಬೆಳೆಯಲು ಒಂಟೆಯ ಜೋಡಿ...
    ಇನ್ನು ಸಣ್ಣ ಸಣ್ಣ ಸೈನಿಕರು ಮನೆತುಂಬಾ ಮಕ್ಕಳಿದ್ದಂತೆ..
    ರಾಜಾ ರಾಣಿಯು ಎತ್ತು ಮತ್ತು ಹಸು ಇದ್ದಂತೆ..
    ಎತ್ತು ಎಳೆಯುವುದು ಬದುಕಿನ ಕಷ್ಟದ ಬಂಡಿಯ..
    ಹಸು ನೀಡುವುದು ಹಾಲಿನಂತಹಾ ಸಿಹಿಯ ಸ್ವರ್ಗ ಸುಖದ ಪರಿಚಯ
    ನೋವು ಮತ್ತು ನಲಿವು ಎರಡರ ಮಿಶ್ರಣದ ನಡುವೆ ನಮ್ಮ ಜೀವನ
    ಬೇವುಬೆಲ್ಲದ ಸಮಾಗಮದಂತೆ .. ಸಿಹಿ ಕಹಿಗಳ ಅರ್ಥಗಳ ಬದುಕು..
    ಪ್ರಯಾಣ ಮಾಡುವ ದಾರಿಯ ಅಂತ್ಯವು ತಿಳಿಯದೆ.. ಸಾಗುವಾ ಒಂದೇ ನಿಲ್ದಾಣದ ಗಾಡಿಯ ಸವಾರಿಯಂತೆ...
    ಎಲ್ಲದರ ಮಿಶ್ರಣ ಬಲು ಅರ್ಥಪೂರ್ಣ ನಿಮ್ಮ ಕವನ.. ಉತ್ತಮ ರಚನೆ ವಸಂತ್ ಸರ್.. :)

    ReplyDelete