Monday, June 27, 2011

ಮಾತು.

ನಾವಾಡುವ ಮಾತು
ಮತ್ತೊಬ್ಬರಿಗೆ ಅರ್ಥವಾಗುವಂತಿರಬೇಕು
ಹಾಗಿಲ್ಲದಿದ್ದಲ್ಲಿ ಮಾತನಾಡದ
ಮೌನವೇ ಲೇಸು.
ನಮ್ಮ ಮಾತು ಹತ್ತು ಜನಕ್ಕೆ
ಉಪಯೋಗಪ್ರಾಯದಂತಿದ್ದರೆ
ನಮ್ಮ ಗೌರವಕ್ಕೆ ತಕ್ಕ ಬೆಲೆ ಸಿಗುತ್ತದೆ.
ಅದೇ ಮಾತು
ಯಾವತ್ತೂ ಮತ್ತೊಬರ ನೆಮ್ಮದಿಗೆ
ಧಕ್ಕೆ ತರುವಂತಾಗಕೂಡದಲ್ಲವೆ.

ತಿಳಿಸಬಹುದಲ್ಲವೆ ?.

ನಮ್ಮ ಬಾಳೊಂದು ಭವ್ಯ ನೆಲೆಯೋ ಅಥವಾ ಬೆಂಡೆಕಾಯಿ ಪಲ್ಯವೋ ಅನ್ನುವುದಲ್ಲ. ನಮ್ಮ ಬಾಳಿನಲ್ಲಿ ನಮ್ಮ ನಡೆ ಯಾವ ದಿಕ್ಕಿನೆಡೆಗೆ ಸಾಗುತ್ತಿದೆ ಅದರಲ್ಲಿ ನಾವೆಷ್ಟು ಸಾಧನೆಯನ್ನು ಮಾಡುತ್ತಿದ್ದೇವೆ ನಮ್ಮ ಪರಿಶ್ರಮ ನಮಗೆ ಪರಿಪೂರ್ಣತೆಯನ್ನು ಕೊಡಬಲ್ಲದೆ ಅನ್ನೋದು ಮುಖ್ಯ. ನಾವು ಮಾಡುವ ಸಾಧನೆ ಅಥವಾ ಪರಿಶ್ರಮ ಮತ್ತಲವರಿಗೆ ಮಾದರಿಯಾಗುವಂತಿದ್ದರೆ ನಮ್ಮಂಥ ನೂರಾರು ಸಾಧಕರನ್ನು ಹೊರತರುವ ಭಾಗ್ಯ ನಮ್ಮದೇ ಆಗಿರುತ್ತದೆ. ಇದನ್ನು ಜಗತ್ತೇ ಕೊಂಡಾಡಿ ಎಲ್ಲರಿಗೂ ತಿಳಿಸಬಹುದೆನೋ ಅಲ್ಲವೆ... ?.

Wednesday, June 22, 2011

Punishment ...