Tuesday, December 28, 2010

ಬೆಲೆ...!.

Saturday, December 18, 2010

ಜೀವನ ಮತ್ತು ಗುರಿ...!.

Wednesday, December 15, 2010

ಜೋಡಿ ಹಕ್ಕಿಗಳು.!.

Tuesday, December 14, 2010

ಹೆಣ್ಣು...!..

Monday, December 13, 2010

ಪ್ರೀತಿ...!.

Sunday, November 21, 2010

ಸಮರ್ತನೆ.....!.ಮಾಡಿದ ತಪ್ಪನ್ನು ಮತ್ತೆ ಮತ್ತೆ ಸಮರ್ತಿಸಿಕೊಂಡು ಹೋದಲ್ಲಿ...
ಅದು ನೂರು ತಪ್ಪುಗಳಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ...
ಅದ್ದರಿಂದ ತನ್ನ ತಪ್ಪನ್ನು ಒಪ್ಪಿಕೊಂಡು...
ತಿದ್ದಿಕೊಳ್ಳಲು ಮನಸು ಮಾಡಿದ್ದೇ ಆದಲ್ಲಿ...
ಅಂತಹವನು ಮತ್ತೊಂದು ತಪ್ಪನ್ನು ಮಾಡಲಾರ..!.

                                                                ವಸಂತ್ 
ಚಿತ್ರಕೃಪೆ..http://addicted-2-retail.com

Thursday, November 18, 2010

ಭಕ್ತಿ....!.

ಭಗವಂತನಲ್ಲಿ ನಿನಗೆ ಭಕ್ತಿಯಿಲ್ಲದಿದ್ದರು ಚಿಂತೆಯಿಲ್ಲ...
ನಿನ್ನೊಳಗಿನ ಆತ್ಮವು ಪರಿಶುದ್ಧವಾಗಿದ್ದರೆ ಸಾಕು...
ನಿನ್ನಲ್ಲೆ ನೀ ಭಗವಂತನನ್ನು ಕಂಡಂತೆ....
                            
                                                                            ವಸಂತ್

 ಚಿತ್ರಕೃಪೆ.http://lh3.ggpht.com/

Sunday, November 14, 2010

ಸತ್ಯ ಸತ್ಯತೆ...!.

ಒಂದೆಡೆ ಕುಳಿತು ಈ ಲೋಕವನ್ನು ತಿದ್ದುತ್ತೇನೆ ಎಂಬುದು ಮೂರ್ಖತನ. ಇದರಿಂದ
ಇತರೆಡೆ ನಡೆಯುವ ಪರಿಸ್ಥಿತಿಗಳ ವಸ್ತು ಸ್ಥಿತಿಯು ನಮಗೆ ಅರ್ಥವಾಗದೆ ಹೋಗಬಹುದು.
ಖುದ್ದಾಗಿ ಹೋಗಿ ಅವಲೋಕಿಸಿದಾಗ ಮಾತ್ರ ಅಲ್ಲಿನ ಸತ್ಯ ಸತ್ಯತೆಯನ್ನು ಅರಿಯಲು ಸಾಧ್ಯವಿದೆ..

ಚಿತ್ರಕೃಪೆ.. http://lh6.ggpht.com/

Thursday, November 11, 2010

ಸಾವು...!.
ಸಾವು ಎಂಬುದು ಜೀವ ಪಡೆದ ಯಾರನ್ನೂ ಬಿಡುವುದಿಲ್ಲ..
ಅದು ಪ್ರಪಂಚವನ್ನೇ ಪ್ರತಿನಿಧಿಸುವ ವೆಕ್ತಿಯಿರಲಿ..
ಸದಾ ಹೊನ್ನಿನ ರಾಶಿಯಲ್ಲೆ ಮುಳುಗಿ ತೇಲುವ ಶ್ರೀಮಂತನಿರಲಿ..
ಒಂದು ಹೊತ್ತಿನ ಕೂಳಿಗಾಗಿ ಮನೆ ಮನೆ ತಿರುಗಾಡುವ ಭಿಕ್ಷಕನಿರಲಿ..
ನಮ್ಮೋಳಗೆ ಬೇದ ಭಾವಗಳಿರಬಹುದು..
ಆದರೆ ಸಾವಿಗೆ ಯಾವುದೇ ರೀತಿಯ ಬೇದಭಾವಗಳಿಲ್ಲ........

ಚಿತ್ರಕೃಪೆ. http://lh5.ggpht.com/

Tuesday, November 9, 2010

ಇತಿಹಾಸ ...!.

ಮನುಷ್ಯ ಜನ್ಮವನ್ನು ಪಡೆದು ತಾನು ಬೆಳೆದಂತೆ
ಇಂತಹದ್ದೆ ದಾರಿಯಲ್ಲಿ ಚಲಿಸಬೇಕೆಂದುಕೊಳ್ಳುತ್ತಾನೆ
ಪರಿಸ್ಥಿತಿಗಳು ಒತ್ತಡಗಳು ಅವನ ದಿಕ್ಕನ್ನು ಬದಲಿಸುತ್ತವೆ
ಆದರೆ ಛಲ ಬಿಡದ ಕೆಲವರು ಮಾತ್ರ ತನ್ನ ಗಮ್ಯಸ್ಥಾನವನ್ನು ಸೇರುತ್ತಾರೆ
ಅಂತಹವರೆ ಎಂದೂ ಮರೆಯದ ಇತಿಹಾಸವನ್ನು ನಿರ್ಮಿಸಲು ಕಾರಣ ಕರ್ತರಾಗುತ್ತಾರೆ.!.
ಚಿತ್ರಕೃಪೆ. http://nirvaana.files.wordpress.com

ಅಗೋಚರ ಶಕ್ತಿ ....!..


ಮನುಷ್ಯರಾದ ನಾವುಗಳು ಎಷ್ಟೇ ಬುದ್ದಿವಂತರಾಗಿದ್ದರು ನಮ್ಮಿಂದ.
ಕತ್ತಲಲ್ಲಿ ಸೂರ್ಯನನ್ನು ತರಲಾಗದು,
ಗಾಳಿಯ ದಿಕ್ಕನ್ನು ಬದಲಿಸಲಾಗದು,
ಸುರಿವ ಮಳೆಯನ್ನು ತಡೆಯಲಾಗದು,
ಚಂಚಲ ಮನಸಿನ ವೇಗವನ್ನು ಆಳೆಯಲಾಗದು,
ಅಂತೆಯೆ ನಮ್ಮ ಸಾವನ್ನು ಸಹ ನಮ್ಮಿಂದ ಗೆಲ್ಲಲಾಗದು
ಇದೇ ಮನುಷ್ಯನಿಗೆ ಅರ್ಥವಾಗದ ಮತ್ತು ಕಣ್ಣಿಗೆ ಕಾಣದ ಅಗೋಚರ ಶಕ್ತಿ ...... 

                                                                                                             ವಸಂತ್

Sunday, November 7, 2010

ನಗು...!.

ನಗುನಗುತ ಇದ್ದರೆ ಈ ಜಗವು ನಮಗೆ 
ಮಿನುಗುವ ವಜ್ರದಂತೆ ಸುಂದರವಾಗಿ ಕಾಣುತ್ತದೆ................ 
ಮುನಿಸಿಕೊಂಡರೆ ಏನಿದೆ ? 
ಕತ್ತಲಲ್ಲಿ ಸಣ್ಣ ಮಿಣುಕು ಹುಳುವನ್ನು ನಮ್ಮಿಂದ ಕಾಣಲಾಗದು.......

                                                                                                    Keep Smile

                                                                                                                        ವಸಂತ್

Saturday, October 30, 2010

ಶ್ರಮದ ಬೆಲೆ.....!.ಕೂತು ತಿಂದರೆ ಬೆಟ್ಟದಷ್ಟು ಹೊನ್ನು ಕರಗಿಹೋಗಬಲ್ಲದು.
ಇದರಿಂದ ನಿನ್ನ ಶ್ರಮದ ಬೆಲೆ ನಿನಗೆ ತಿಳಿಯುವುದಿಲ್ಲ...
ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನದಂತೆ
ಕಾಯಕ ಯೋಗಿಗಳಾಗಿ ಮುಂದಾದರೆ...................
ನಮ್ಮ ಶ್ರಮದ ಬೆಲೆ ನಮಗೆ ಅರ್ಥವಾಗುತ್ತದೆ............

                                                                             ವಸಂತ್

ಚಿತ್ರಕೃಪೆ. http://www.kendasampige.com

Friday, October 29, 2010

ಅನ್ನದಗುಳು....!..

     ನಾವು ತಿನ್ನುವ ಅನ್ನದ ಪ್ರತಿಯೊಂದು ಅಗಳಿನಲ್ಲೂ ನಮ್ಮ ಹೆಸರು ಬರೆರಿರುತ್ತೆ ನಿಜ !!.
ಆದರೆ ಅದನ್ನು ಕಷ್ಟ ಪಟ್ಟು ಬೆಳೆಯುವ ರೈತನ ಬೆವರೂ ಸಹ ಅಡಗಿರುತ್ತೆ ಎನ್ನುವುದನ್ನು
ನಾವು ಏಂದು ಮರೆಯಬಾರದು. ಏಕೆಂದರೆ ಈ ದೇಶದ ಬೆನ್ನೆಲುಬು ರೃತನೇ ಅಲ್ಲವೆ...!.

                                                                                                    ವಸಂತ್
ಚಿತ್ರಕೃಪೆ. http://mykoreankitchen.com

Thursday, October 28, 2010

ಪಾಪ ಪ್ರಜ್ಞೆ.......!.

ನಮ್ಮ ಜೀವನದಲ್ಲಿ ಯಾವುದಾದರೊಂದು ತಪ್ಪನ್ನು ಮಾಡಿದ್ದಲ್ಲಿ
ಮಾಡಿದ ತಪ್ಪಿನ ಬಗ್ಗೆ ನಮಗೆ ಪಾಪ ಪ್ರಜ್ಞೆ ಕಾಡುವಂತಿರಬೇಕು.
ಹಾಗ ಮಾತ್ರ ಮತ್ತೊಂದು ತಪ್ಪಿನ ಬಗ್ಗೆ ನಮಗೆ ಅರಿವಿರುತ್ತದೆ...

ಚಿತ್ರಕೃಪೆ..http://www.kathaldesam.com

Wednesday, October 27, 2010

ಕಣ್ಣೀರು ....!.

ನಮಗೆ ದುಃಖವಾದರೂ ಕಣ್ಣೀರು ಬರುತ್ತದೆ......................
ಅತಿಯಾದ ಸಂತೋಶವಾದರೂ ಕಣ್ಣೀರು ಬರುತ್ತದೆ............
ಹಾಗೆ ಈ ಕಣ್ಣೀರಿನ ರೂಪ ಮಾತ್ರ ಒಂದೇ......................
ಆದರೆ ನಿಜ ಜೀವನದಲ್ಲಿ ಕಷ್ಟ ಬೇರೆ ಸುಖವು ಬೇರೆಯಂತ್ತಿರುತ್ತದೆ..

                                                                                   ವಸಂತ್
ಚಿತ್ರಕೃಪೆ. http://www.free-extras.com

Tuesday, October 26, 2010

ಗೌರವ...!.


     ಹಿರಿಯರ ಬಗ್ಗೆ ನಿಮಗೆ ಗೌರವವಿಲ್ಲದಿದ್ದರೂ ಚಿಂತೆಯಿಲ್ಲ
ಆದರೆ ಅವರನ್ನು ಅಗೌರವದಿಂದ ಮಾತ್ರ ಎಂದಿಗೂ ಕಾಣದಿರಿ.

                                                                                    ವಸಂತ್
ಚಿತ್ರಕೃಪೆ. http://lh6.ggpht.com

Monday, October 25, 2010

ನಾಲ್ಕು ದೀಪಗಳು..!.


ನ್ಯಾಯ, ನೀತಿ, ಧರ್ಮ, ಸತ್ಯಗಳೆಂಬ ದೀಪಗಳು
ತಮ್ಮ ಬಳಿ ಉಳಿದಿರುವ ಅಲ್ಪ ಸ್ವಲ್ಪ ಎಣ್ಣೆಯೊಂದಿಗೆ
ಮಂದವಾದ ಬೆಳಕನ್ನು ತೋರುತ್ತ ಹುರಿದರೆ..

ಅನ್ಯಾಯ, ಅನೀತಿ, ಅಧರ್ಮ, ಕ್ರೋದವೆಂಬ ಪಾಪಗಳಿಗೆ
ಎಣ್ಣೆಯೇ ಇಲ್ಲದಿದ್ದರೂ ಅವುಗಳು ಅಗ್ನಿ ಜ್ವಾಲೆಯಂತಾಗಿ
ಇಡೀ ಲೋಕವನ್ನೇ ಧಹಿಸಿಬಿಡುತ್ತಿವೆ....!.

ಚಿತ್ರಕೃಪೆ. http://lh6.ggpht.com

ಅಂತರ..!.


ಅಂತರ


ನಮ್ಮ ಜೀವನದಲ್ಲಿ ಒಂದು ಗೆಲುವನ್ನು ಪಡೆಯಬೇಕಾದರೆ
ಹತ್ತು ಬಾರಿ ಸೋಲನ್ನು ಅನುಭವಿಸಬೇಕಾಗುತ್ತದೆ.

                                                                                    

Thursday, October 21, 2010

ಅರ್ಥ..!.

       ನಾವು ಬರಿ ಕಣ್ಣಿನಿಂದ ಯಾವರೀತಿಯಲ್ಲಿ ಹೆಚ್ಚು ದೂರವನ್ನು ನೋಡಲು ಸಾಧ್ಯವಾಗುವುದಿಲ್ಲವೋ. ಹಾಗೇ ನಮ್ಮ ಬದುಕಿನ ಅರ್ಥವನ್ನು ಸಹ  ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದೇ ಇಲ್ಲ.

Wednesday, October 20, 2010

ಸುಳ್ಳು..!.


   ಯಾವುದೋ ಒಂದು ಸಂದರ್ಭ ಅಥವಾ ಸಮಯ ನಮ್ಮನ್ನು ಸುಳ್ಳು ಹೇಳಿಸುತ್ತದೆ. ಹಾಗಂತ ಸುಳ್ಳನ್ನೇ ರುತ್ತಿಯನ್ನಾಗಿಸಿಕೊಂಡಲ್ಲಿ ನಮ್ಮೊಳಗಿನ ಸತ್ಯ ನಶಿಸಿ ಹೋಗಬಹುದು.

ಕಣ್ಣು ಮತ್ತು ಹೃದಯ...!.


ಕಣ್ಣು ತಾನೀರುವುದನ್ನು ಅತ್ತು ತೋರಿಸಿದರೆ.
ಹೃದಯ ತನ್ನಿರುವಿಕೆಯನ್ನು ಮಿಡಿದು ತೋರಿಸುತ್ತದೆ.
ಇವೆರಡು ಇಲ್ಲದಿದ್ದಲ್ಲಿ ನಮ್ಮ ಜೀವನ ಆಸಾಧ್ಯ.

ಚಿತ್ರಕೃಪೆ. http://i713.photobucket.com

ಮನುಷ್ಯತ್ವ...!.

  ಮನುಷ್ಯ ತಾನು ಹಣದಲ್ಲಾಗಲಿ, ಅಧಿಕಾರದಲ್ಲಾಗಲಿ ಎಷ್ಟೇ ಬೆಳೆದಿದ್ದರೂ ಮನುಷ್ಯತ್ವವನ್ನು ಮಾತ್ರ ಎಂದೂ ಮರೆಯಬಾರದು. ಇದನ್ನು ನೆನಪಿಟ್ಟುಕೊಂಡು ಜೀವನದಲ್ಲಿ ಮುಂದುವರೆದಲ್ಲಿ ಅವನು ಹುತ್ತುಂಗದ ಪರ್ವವನ್ನು ಹೇರಿದಂತೆ..

ಜಾಣತನ...!.

  
   ಜಾಣತನ ಮತ್ತು ಬುದ್ದಿವಂತಿಕೆಯು ಎಲ್ಲರಲ್ಲೂ ಸಮನಾಗಿ ಹಂಚಲ್ಪಟ್ಟಿರುತ್ತದೆ.
ಆದರೆ ಅದನ್ನು ಸಮಯಕ್ಕೆ ತಕ್ಕಂತೆ ಉಪಯೋಗಿಸುವವನೆ ಜಾಣನಾಗುತ್ತಾನೆ....!.


ಚಿತ್ರಕೃಪೆ. http://lh4.ggpht.com

ಯಶಸ್ಸು..!.   ಯಶಸ್ಸು ಎನ್ನುವುದು ಕೇವಲ ಒಂದು ಬಾರಿ ಪ್ರಯತ್ನಿಸಿ ಸುಮ್ಮನಾಗುವಂತ ವಸ್ತುವಲ್ಲ.. ಅದನ್ನು ಪಡೆಯಲು  ಪರಿಶ್ರಮ, ಬುದ್ದಿವಂತಿಕೆ, ನ್ಶಪುಣ್ಯತೆಯಿಂದ ಸತತವಾಗಿ ಪ್ರಯತ್ನಿಸಿದರೆ ಮಾತ್ರ ವಿಜಯ ಲಕ್ಷ್ಮಿ ನಮ್ಮನ್ನು ಒಲಿಯುತ್ತಾಳೆ.

ಕೆಲಸ ಮತ್ತು ಸಮಯ...!.


   ಹಗಲು ಮತ್ತು ರಾತ್ರಿಗಳು ಯಾರನ್ನು ಆಶ್ರಯಿಸದೆ ಯಾವ ರೀತಿಯಲ್ಲಿ  ತಮ್ಮ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಂಡು ಹೋಗುತ್ತಿರುತ್ತವೆಯೋ. ಅದೇ ರೀತಿಯಲ್ಲಿ ನಾವು ಯಾರನ್ನೂ ಆಶ್ರಯಿಸದೆ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಂಡು ಹೋದರೆ. ಮತ್ತೊಬ್ಬರ ವಕ್ರದೃಷ್ಟಿಯಿಂದ ಪಾರದಂತೆ.

ಮನಸ್ಸು ....!.

    ಸಾಗರವನ್ನು ದೂರದಿಂದ ನೋಡಲು ತುಂಬಾ ನಿರ್ಮಲವಾಗಿ ಕಾಣುತ್ತೆ. ಆದರೆ ಅದರ ಭೀಕರತೆಯನ್ನು ಅತ್ತಿರದಿಂದ ನೋಡಿದಾಗಲೇ ಮಾತ್ರ ಅರ್ಥವಾಗೋದು. ನಮ್ಮ ಮನಸ್ಸು ಸಾಗರದಷ್ಟೇ ನಿರ್ಮಲವಾಗಿರುತ್ತದೆ. ಅದನ್ನು ತನ್ನಿಷ್ಟದಂತೆ ಬಿಟ್ಟಲ್ಲಿ ಸಾಗರದಷ್ಟೆ ಭೀಕರತೆಯನ್ನು ಸ್ಶಷ್ಟಿಸಬಹುದು. ಆದ್ದರಿಂದ ಆದಷ್ಟು ನಮ್ಮ ಮನಸ್ಸನ್ನು ನಮ್ಮ ಹಿಡಿತದಲ್ಲಿಟ್ಟುಕ್ಕೊಳ್ಳಲು ಪ್ರಯತ್ನಿಸಬೇಕು.

Tuesday, October 19, 2010

ಸೋಲು ಮತ್ತು ಗೆಲುವು...!.

ಜೀವನದಲ್ಲಿ ಸೋಲು ಯಾರನ್ನು ಬಿಡುವುದಿಲ್ಲ...
ಹಾಗೇಯೆ ಸೋಲಿನ ಬೆನ್ನುಹತ್ತುವಂತ ಗೆಲುವೊಂದಿದೆ...,
ಸದಾ ಸೋಲನ್ನೇ ನೆನೆದು ಕೊರಗುವುದನ್ನು ಬಿಟ್ಟು...
ಗೆಲುವುನ ದಾರಿಯಲ್ಲಿ ಪಯಣಿಸುವದ ಕಲಿಯೋಣ....!.


ಸ್ನೇಹ ಮತ್ತು ಮನಸ್ಸು...!.

  

ಸ್ನೇಹವನ್ನು ಕೇವಲ ಮನುಷ್ಯನಿಂದ ಮಾತ್ರ ಪಡೆಯಬೇಕೆಂದೇನು ಇಲ್ಲ.
ಅದನ್ನು ಪ್ರಾಣಿಗಳಿಂದಲೂ ಸಹ ಪಡೆಯಬಹುದು.    
ಏಕೆಂದರೆ ಮನುಷ್ಯನ ಚಂಚಲ ಮನಸ್ಸು ಒಬ್ಬೊಬ್ಬರದು
ಒಂದೊಂದು ರೀತಿ ಯೋಚಿಸುತ್ತಿರುತ್ತದೆ.
ಕೆಲವರ ಮನಸ್ಸು ಕೃರವಾಗಿ ಯೋಚಿಸುತ್ತಿದ್ದರೆ
ಮತ್ತಲವರದು ನಿರ್ಮಲವಾಗಿ ಯೋಚಿಸುತ್ತದೆ.

ಅದೇ ಏನನ್ನೂ ಅರಿಯದ ಪ್ರಾಣಿಗಳ ಮನಸ್ಸು
ಮೇಲಿನೆರಡಕ್ಕೂ ಬಿನ್ನವೆಂದರೆ ತಪ್ಪಾಗಲಾರದು.
ಒಂದು ಬಾರಿ ಅವುಗಳಿಗೆ ಅತ್ತಿರವಾದರೆ ಸಾಕು
ಸಾಯುವ ತನಕವು ಅವುಗಳು ನಮ್ಮನ್ನು ನೆನಪಲ್ಲಿಟ್ಟುಕೊಂಡಿರುತ್ತವೆ.
ಅದು ಯಾವುದೇ ರೀತಿಯ ಸ್ವಾರ್ಥವನ್ನಿಟ್ಟುಕೊಳ್ಳದೆ
ಮನುಷ್ಯತ್ವವನ್ನು ಮರೆಯುವ ಮಾನವ ಸಂಬಂಧಗಳಿಗಿಂತ
ಮಾತು ಬಾರದ ಪ್ರಾಣಿಗಳೇ ಲೇಸಲ್ಲವೆ ?.


ನೋಟ...!.

ನಮ್ಮ ಕಣ್ಣು ಕೇವಲ ಬಾಹ್ಯ ಸೌಂಧ್ಯವನ್ನು ನೋಡುವುದಕ್ಕೇ ಅಲ್ಲ.
ಮತ್ತೊಬ್ಬರ ಮನಸ್ಸಿನ ದುಃಖವನ್ನು ಸಹ ನೋಡುವಂತಿರಬೇಕು..

ಹಣ..!.

ನಿಮ್ಮ ಬಳಿ ಹೆಚ್ಚು ಹಣವಿದ್ದಾಗ
ಅಗತ್ಯವಿದ್ದಷ್ಟು ಮಾತ್ರ ಖರ್ಚು ಮಾಡಿ
ಉಳಿದಿದ್ದ ಸ್ವಲ್ಪ ಮೊತ್ತವನ್ನಾದರೂ ಜೋಪಾನ ಪಡಿಸಿಕೊಳ್ಳಿ.
ಇದು ನಾಳೆ ನಿಮ್ಮ ಅರಿವಿಗೆ ಬರದಂತಹ ಆಪತ್ತುಗಳಲ್ಲಿ
ರಕ್ಷಣೆಗೆ ಬಂದು ನಿಮ್ಮನ್ನು ಕಾಪಾಡುತ್ತದೆ.

ಕೋಪ ..!.


ಅತಿಯಾದ ಕೋಪ ನಮ್ಮ ನೆಮ್ಮದಿಯನ್ನೇ ಕಸಿದುಕೊಳ್ಳುತ್ತದೆ.
ಇದರಿಂದ ಎಲ್ಲರೂ ನಮ್ಮ ಕಣ್ಣಿಗೆ ಶತ್ರುಗಳಂತೆ ಕಾಣುತ್ತಾರೆ.
ಆದಷ್ಟು ವಿನಯವನ್ನು ಬೆಳಸಿಕೊಂಡಲ್ಲಿ ನೆಮ್ಮದಿಯನ್ನು ಕಾಣಬಹುದು.

                                                          
Tuesday, June 22, 2010

ಚೆನ್ನ ಮಲ್ಲಿಕಾರ್ಜುನ ಮಡಿಲಿಗೆ ಒಂದಷ್ಟು ವಚನಗಳು.


1.
ವಿಧಿಯ ಬರಹದ ಬಗ್ಗೆ ಯೋಚಿಸುವ ಒಬ್ಬರನು ನಾಕಾಣೆ
ತಂತ್ರ ಕುತಂತ್ರಗಳ ಹೆಣೆಯುತ್ತಾ
ಜಾರಿ ಬೀಳುವ ಜನರಿಗಾಗಿ ಕಾದು ಕುಳಿತ
ಜೇಡರಗಳನ್ನು ಶಿಕ್ಷಿಸುವುದೆಂತು ಮಲ್ಲಿಕಾರ್ಜುನ.

2.
ನಿಜವಾದ ಮಾನವರೂಪಿ ದೇಹದಲಿ
ಕಾಮವನ್ನು ಕಾಮವೇ ತಿಂದು
ಕ್ರೋದವನ್ನು ಕ್ರೋದವೇ ತುಳಿದು
ಮಧವು ಮತಿಹೀನವಾಗಿ
ಮತ್ಸರವು ಮತ್ಸರವನ್ನೆ ಮರೆತು
ಲೋಭವನು ಲಾಭವನಾಗಿಸಿಕೊಂಡು
ಮೋಹದೊಂದಿಗೆ ಎಲ್ಲಾ ಮರ್ಮಗಳು
ಮಸಣವನು ಸೇದಂತೆ ಮಲ್ಲಿಕಾರ್ಜುನ.

3.
ತಾನೂ ನಿಜವಾದ ಜ್ಞಾನವಂತನೆಂದುಕೊಳ್ಳುವವನು
ತನ್ನೊಳಗಿನ ಅಜ್ಞಾನದ ಕಿಚ್ಚಿಗೆ ಬಲಿಯಾಗಿ
ದಾರಿ ನೆಟ್ಟಗಿದ್ದರು ಅವನ ಕಣ್ಣಿಗೆ ಅದು
ಸೊಟ್ಟಗೆ ಕಾಣುವುದಲ್ಲ ಮಲ್ಲಿಕಾರ್ಜುನ.

4.
ಮನುಕುಲದ ಕಲ್ಮಶವನ್ನು ತೊಳೆಯಲು
ವಿಧಿಯೇ ಮುಂದೆ ಬಾರದಿದ್ದಾಗ ಅವರವರ
ನಂಜು ಅವರವರನ್ನೆ ಸರ್ವನಾಷವಾಗಿಸುವ
ಕಾಲ ಬಹಳ ದೂರವಿಲ್ಲವಲ್ಲ ಮಲ್ಲಿಕಾರ್ಜುನ.

                                                                     ವಸಂತ್