Monday, November 18, 2013

{ನುಡಿ} ಮುತ್ತು 37



ಯಾವ ಮನೆಯ ಹೊಕ್ಕರೂ
ಸಂತಸದ ಘಮವಿಲ್ಲ
ಸಂಭ್ರಮದ ಚಲುವಿಲ್ಲ
ನೀ ಯಾಕೆ ಬಂದೇ ನರನೆ
ನಿನ್ನ ಪರಿಚಯ ನನಗಿಲ್ಲ
ಎನ್ನುತ್ತಿಹರಯ್ಯ ಮಲ್ಲಿಕಾರ್ಜುನ
ನೀ ಹೇಳು ನನಗೆ
ನಾ ಯಾರ ಮನೆ ಹೊಕ್ಕಿ ಬರಲಿ❞.

Friday, November 30, 2012

{ನುಡಿ} ಮುತ್ತು 36


ಅನ್ಯರನು ನಿಂದಿಸುವ
ನಿಂದನೆಯಲೇ ನಗುವ
ಪರಪಮ ಪಾಪಿಯು ನಾನಾದರೂ ಸರಿಯೇ
ಶಿಕ್ಷಿಸದೇ ಬಿಡದಿರು ಮಲ್ಲಿಕಾರ್ಜುನ.

Thursday, November 29, 2012

{ನುಡಿ} ಮುತ್ತು 35

ಗತಿಸಿದಾ ಕಾಲದಲಿ
ಚಿನ್ನ ಹೊನ್ನಿನ ಹೊಳೆಯು
ಬೆರಗು ಬಿನ್ನರ ಕಳೆಯು
ಮರೆವು ಮಾಸೆಂದರೆ
ಹೇಗೆ ಮರೆವರಯ್ಯಾ ಹೇಳು ?
ಅಧಿಕಾರವೆಂಬುದು
ಅಮಲಿನ ಗಡಿಗೆಯಂತೆ.

{ನುಡಿ} ಮುತ್ತು 34

ನಾನು ನಾನೆಂಬೆನೆ
ನನದು ನನದೆಂಬೆನೆ
ನನ್ನದೇನಿಹದಯ್ಯ ಮಲ್ಲಿಕಾರ್ಜುನ
ನಿನ್ನ ಸನ್ನಿದಿಯೊಳು.